Modada Olage

1 views

Lyrics

ಮೋಡದ ಒಳಗೆ ಹನಿಗಳ ಬಳಗ
 ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
 ನನ್ನೊಳಗೊಳಗೆ ಒಲವಿನ ಯೋಗ
 ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
 ಕಾವ್ಯ, ಕುಸುರಿ ಗೊತ್ತಿಲ್ಲ, ಹಾಡುಗಾರ ನಾನಲ್ಲ
 ನಿನ್ನೇ ಪ್ರೀತಿ ಮಾಡುವೆ ನಾನು, ಇಷ್ಟೇ ಹಂಬಲ
 ನಿನ್ನೇ ಪ್ರೀತಿ ಮಾಡುವೆ ನಾನು, ಇಷ್ಟೇ ಹಂಬಲ
 ♪
 ನಿಂತಲಿ ನಾ ನಿಲಲಾರೆ, ಎಲ್ಲರೂ ಹೀಗಂತಾರೆ
 ಏತಕೋ ನಾ ಕಾಣೆನು ಈ ತಳಮಳ? ಹೇ-ಹೆ
 ಪ್ರೀತಿ ನನ್ನ ಬಲೆಯೊಳಗೋ, ನಾನೇ ಪ್ರೀತಿ ಬಲೆಯೊಳಗೋ?
 ಕಾಡಿದೆ, ಕಂಗೆಡಿಸಿದೆ ಸವಿ ಕಳವಳ ...
 ಖಾಲಿ ಜೇಬಿನ मजनूँ, ಪ್ರೀತಿ ಒಡೆಯನಾಗುವೆನು
 ನಿನ್ನ ಬಿಟ್ಟು ಹೇಗಿರಬೇಕು, ಹೇಳೇ, ಪ್ರಾಣವೇ
 ನಿನ್ನ ಬಿಟ್ಟು ಹೇಗಿರಬೇಕು, ಹೇಳೇ, ಪ್ರಾಣವೇ
 ಮೋಡದ ಒಳಗೆ ಹನಿಗಳ ಬಳಗ
 ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
 ♪
 Hey, hey, I love you
 Say, say that you love me
 Love me, love me, love me da
 Love me, love me, love me now
 ♪
 ನಾನು ನಿನ್ನ ಕಣ್ಣೊಳಗೆ ಮಾಯೆ ಕನ್ನಡಿ ನೋಡಿರುವೆ
 ನನ್ನನು ಬರಸೆಳೆಯುವ ಕಲೆ ನಿನ್ನದು, ಹೇ...
 ಯಾವ ಜನುಮದ ಸಂಗಾತಿ, ಈಗಲೂ ಸಹ ಜೊತೆಗಾತಿ
 ಅದ್ಭುತ ಈ ಅತಿಶಯ ನಾ ತಾಳೆನು...
 ನಾನು ಬಡವ ಬದುಕಿನಲಿ, ಸಾಹುಕಾರ ಪ್ರೀತಿಯಲಿ
 ನೀನೇ ನನ್ನ ನಾಡಿಯಲಿ ಜೀವ ಎಂದಿಗೂ
 ನೀನೇ ನನ್ನ ನಾಡಿಯಲಿ ಜೀವ ಎಂದಿಗೂ
 ಮೋಡದ ಒಳಗೆ ಹನಿಗಳ ಬಳಗ
 ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
 ನನ್ನೊಳಗೊಳಗೆ ಒಲವಿನ ಯೋಗ
 ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
 ಕಾವ್ಯ, ಕುಸುರಿ ಗೊತ್ತಿಲ್ಲ, ಹಾಡುಗಾರ ನಾನಲ್ಲ
 ನಿನ್ನೇ ಪ್ರೀತಿ ಮಾಡುವೆ ನಾನು, ಇಷ್ಟೇ ಹಂಬಲ
 ನಿನ್ನೇ ಪ್ರೀತಿ ಮಾಡುವೆ ನಾನು, ಇಷ್ಟೇ ಹಂಬಲ
 

Audio Features

Song Details

Duration
06:02
Key
2
Tempo
125 BPM

Share

More Songs by Sonu Nigam

Albums by Sonu Nigam

Similar Songs