Nannavalu Nannavalu
1
views
Lyrics
ನನ್ನವಳು ನನ್ನವಳು ನನ್ನೊಳಗೆ ಕುಂತವಳು ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ ನನ್ನ ಬಾಳ ದಾರಿಗೆ ನೀನೆ ನಗುವ ನಂದನ ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ ನನ್ನವಳು ನನ್ನವಳು ನನ್ನೊಳಗೆ ಕುಂತವಳು ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು ♪ ನಗುವೇ ಮುಂಜಾನೆಯಂತೆ ಲಜ್ಜೆ ಮುಸ್ಸಂಜೆಯಂತೆ ನಡಿಗೆ ಮುಂಗಾರಿನಂತೆ ಮುನಿಸು ಹಿಂಗಾರಿನಂತೆ ಮುಂಗುರುಳೆ ಮೋಡಗಳು ಮಿಸುಕಾಟವೇ ಮಿಂಚುಗಳು ಬಿಂಕಾಬಿನ್ನಾಣ ಆರತಿ ನಡುವಿಗೆ ವಡ್ಯಾಣ ನೋಟ ಕುಡಿನೋಟ ಈ ನಡುವಿರುಳಲಿ ಮಧ್ಯಾಹ್ನ ಒಂದೊಂದು ಘಳಿಗೆಗೂ ಗುಂಡಿಗೆಯಲಿ ಅವಳದೇನೆ ಧ್ಯಾನ ನನ್ನವಳು ನನ್ನವಳು ನನ್ನೊಳಗೆ ಕುಂತವಳು ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು ♪ ಕೊರಳು ಕೋಗಿಲೆಯಂತೆ ನೆರಳು ಮಾಮರಗಳಂತೆ ಸನಿಹ ತಂಗಾಳಿಯಂತೆ ಸ್ಪರ್ಶ ಪನ್ನೀರಿನಂತೆ ವಯ್ಯಾರಕೆ ಮಿತಿಯಿಲ್ಲ ಸಿಂಗರಕೆ ಸಮವಿಲ್ಲ ಮನವೇ ಯವ್ವನವೇ ಅವಳುಸಿರಿನ ಕಾದಂಬರಿಯೇ ಬರೆಯೋ ಪ್ರತಿ ಪದವು ಗರಿಗೆದರಿದೆ ನವಿಲಿನ ಗರಿಯೆ ಅವಳಿಟ್ಟ ಹೆಜ್ಜೆಯ ಗೆಜ್ಜೆ ನಾದಕೆ ಧರೆಯ ಧನ್ಯ ಅಂತು ನನ್ನವಳು ನನ್ನವಳು ನನ್ನೊಳಗೆ ಕುಂತವಳು ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ ನನ್ನ ಬಾಳ ದಾರಿಗೆ ನೀನೆ ನಗುವ ನಂದನ ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ
Audio Features
Song Details
- Duration
- 04:00
- Key
- 5
- Tempo
- 174 BPM