Nee Sanihake Bandre

1 views

Lyrics

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
 ಹೇಳು ನೀನು
 ನೀನೇ ಹೇಳು
 ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
 ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
 ಏನು ಹೇಳು
 ಹೇಳು ನೀನು
 ♪
 ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
 ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
 ನಿನ್ನ ಬಿಟ್ಟು ಇಲ್ಲ ಜೀವ
 ಎಂದೂ ಕೂಡ ಒಂದು ಘಳಿಗೆ
 ನಿನ್ನ ಮಾತು ಏನೇ ಇರಲಿ
 ನಿನ್ನ ಮೌನ ನಂದೇ ಏನು
 ನೀ ಸನಿಹಕೆ ಬಂದರೆ ಹೃದಯದ ಗತಿಯೇನು
 ಹೇಳು ನೀನು
 ನೀನೇ ಹೇಳು
 ♪
 ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
 ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
 ಉಸಿರು ಹಾರಿ ಹೋಗುವ ಹಾಗೆ
 ಬಿಗಿದು ತಬ್ಬಿ ಕೊಲ್ಲು ನೀನು
 ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
 ದಾರಿಯಲ್ಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೇ ಏನು
 ನೀ ಸನಿಹಕೆ ಬಂದರೆ ಹೃದಯದ ಗತಿಯೇನು
 ಹೇಳು ನೀನು
 ನೀನೇ ಹೇಳು
 ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
 ಏನು ಹೇಳು
 ಹೇಳು ನೀನು
 

Audio Features

Song Details

Duration
04:24
Key
1
Tempo
107 BPM

Share

More Songs by Sonu Nigam

Albums by Sonu Nigam

Similar Songs