Neenu Banda Mele
2
views
Lyrics
ಓ, ನೀನು ಬಂದ ಮೇಲೆ ನಾನಾದೆ ಜೀವಂತ ನಾನು ನಿಂತ ಭೂಮಿ ಮುಂಚೇನು ಹೀಗಿತ್ತಾ? ನೀನು ಬಂದ ಮೇಲೆ ನಾನಾದೆ ಜೀವಂತ ನಾನು ನಿಂತ ಭೂಮಿ ಮುಂಚೇನು ಹೀಗಿತ್ತಾ? ನೆನೆಯುತ್ತ ನಿನ್ನನು ಹೊಸ ಲೋಕ ಕಂಡೆನು ಮರುಳಾದೆ, ಏನೇ ಇದು ನಿನ್ನ ಜಾದೂ? ಎದುರಲೂ ನೀನೇನೇ, ಎದೆಯಲೂ ನೀನೇನೇ ಎದ್ದರೂ ನೀನೇನೇ, ನಿದ್ದೆಲೂ ನೀನೇನೇ ಓ, ನೀನು ಬಂದ ಮೇಲೆ ನಾನಾದೆ ಜೀವಂತ ನಾನು ನಿಂತ ಭೂಮಿ ಮುಂಚೇನು ಹೀಗಿತ್ತಾ? ♪ ಓ, ಮೆಲ್ಲನೆ ಊರಿ ಪಾದ ಜೀವಕೆ ನೀನು ಬಂದ ಸೋಜಿಗ ಎಂಥ ಚಂದಾನೇ ಹೋ, ನಕ್ಕರೆ ನೀ, ನಾನು ಹಾಳಾಗಿ ಹೋದೆ ಹೇಳು ನೀನೇ, ತಪ್ಪು ನಂದೇನಿದೆ? ಬಾಳುವ ಉತ್ಸಾಹ ಹೆಚ್ಚಾಯ್ತು ಹೀಗೆ ನಿನ್ನಯ ಸಾನಿಧ್ಯ ಸಿಕ್ಕಾಗ ನಂಗೆ ನಿಜ, ನಾನು ಇನ್ಮುಂದೆ ನಿನ್ಗೆ ಋಣಿ ಎದುರಲೂ ನೀನೇನೇ, ಎದೆಯಲೂ ನೀನೇನೇ ಎದ್ದರೂ ನೀನೇನೇ, ನಿದ್ದೆಲೂ ನೀನೇನೇ ಓ, ನೀನು ಬಂದ ಮೇಲೆ ನಾನಾದೆ ಜೀವಂತ ನಾನು ನಿಂತ ಭೂಮಿ ಮುಂಚೇನು ಹೀಗಿತ್ತಾ? ♪ ಓ, ಸಾವಿರ ಹುಡುಗೀರಿಗೆ ಸಾಲುವ ಚಂದ ಹೀಗೆ ಒಂದೇ ಮೈ ಸೇರಿಕೊಂಡಂತೆ ಆ-ಹಾ-ಹಾ, ನಾನೆಂಥ ಅದೃಷ್ಟವಂತ! ಕಣ್ಣ ಮುಂದೆ ನೀನೇ ಓಡಾಡುತ ನಿನ್ನಲ್ಲಿ ನಾ ಕಂಡೆ ನನ್ನೆಲ್ಲ ಖುಷಿ ನಿನ್ನನ್ನು ಬಿಟ್ಟಾಗ ಬೇರೆಲ್ಲ ಹುಸಿ ನನ್ನ ದಾರಿ ನೀನೇನೇ, ನೀನೇ ಗುರಿ ಎದುರಲೂ ನೀನೇನೇ, ಎದೆಯಲೂ ನೀನೇನೇ ಎದ್ದರೂ ನೀನೇನೇ, ನಿದ್ದೆಲೂ ನೀನೇನೇ ಓ, ನೀನು ಬಂದ ಮೇಲೆ ನಾನಾದೆ ಜೀವಂತ ನಾನು ನಿಂತ ಭೂಮಿ ಮುಂಚೇನು ಹೀಗಿತ್ತಾ?
Audio Features
Song Details
- Duration
- 03:54
- Key
- 11
- Tempo
- 100 BPM