Paatashaala
2
views
Lyrics
ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರುವೊಬ್ಬ ತಾನೇ ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ ಅವನೂನು ಅನ್ನದಾತನೇ ತಪ್ಪು ಸರಿಯಾ ತಿದ್ದಿ ತಿಳಿ ಹೇಳಿ ಸಮಬುದ್ಧಿ ನಮ್ಮ ಚಿತ್ತ ಶುದ್ಧಿ ಆಗೋ ಹಾದಿ ಎಷ್ಟೇ ದೂರ ಹೋದ್ರು ಮರೀಬೇಡ ನಿನ ಬೇರು ನಿನ್ನ ಸಾಧನೆಗೆಲ್ಲ ಇದುವೇ ಆದಿ ಪಾಠಶಾಲಾ ಪಾಠಶಾಲಾ ಪಾಠಶಾಲಾ ಪಾಠಶಾಲಾ ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರುವೊಬ್ಬ ತಾನೇ ಅಕ್ಷರ ಕಲಿಸೋ ಅಜ್ನ್ಯಾನ ಅಳಿಸೋ ಅವಾನೂನು ಅನ್ನದಾತನೇ ♪ ಪ್ರತಿಯೊಂದು ಮಾತು ಕಲಿತ ಜಾಗ ಪ್ರತಿ ಹೆಜ್ಜೆ ಗುರುತು ಅರಿತ ಜಾಗ ಕನಸುಗಳ ಜೊತೆಗೆ ನಡೆದ ಜಾಗ ಸ್ನೇಹಿತರ ಪ್ರೀತಿ ಪಡೆದ ಜಾಗ ಎಲ್ಲರು ಒಂದೇ ಇಲ್ಲಿ ಮೇಲು ಕೀಳಿಲ್ಲ ಜ್ಞಾನದ ಹಸಿವಿದ್ದಾಗ ಮೊದಲು ಕೊನೆಯಿಲ್ಲ ಮನೆಯೇ ಮೊದಲ ಶಾಲೆ ತಾಯಿನೇ ಗುರುವು ತಾಯಿಗೂ ಪಾಠ ಹೇಳಿದ ಗುರುವೇ ಅರಿವು ಎಲ್ಲ ದಾನಕು ಶ್ರೇಷ್ಠ ವಿದ್ಯೆ ಎನ್ನುವುದನ್ನು ತಿಳಿದ ದೇಶ ನಮದು ವಿಶ್ವದ ಕಣ್ಣು ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ನಂಬಿ ನಡೆದರೆ ಸಾಕು ಸಾರ್ಥಕ ಬದುಕು ಪಾಠಶಾಲಾ ಪಾಠಶಾಲಾ ಪಾಠಶಾಲಾ ಪಾಠಶಾಲಾ ♪ ಬೆರೆಯೋದು ಹೇಗೆ ಕಂಡಿದ್ದಿಲ್ಲಿ ಜೊತೆಯಾಗಿ ಹಂಚಿ ತಿಂದಿದ್ದಿಲ್ಲಿ ಹಿರಿಯರಿಗೆ ತಲೆಬಾಗಿ ನಿಂತಿದ್ದಿಲ್ಲಿ ಬದುಕುವ ರೀತಿ ಕಲಿತಿದ್ದಿಲ್ಲಿ ಶಿಕ್ಷಣೆ ಶಿಕ್ಷೆ ಅಲ್ಲ, ನಮ ಕಾಯುವ ರಕ್ಷೆ ಪುಸ್ತಕ ಹಿಡಿದ ಕೈಯಿ ಸರಿದಾರಿಯ ನಕ್ಷೆ ತಂದೆ ತಾಯಿ ದುಡಿಮೆ ನಮ್ಮ ಬೆಳವಣಿಗೆ ತಿದ್ದೋ ಗುರುವಿನ ತಾಳ್ಮೆ ನಮ್ಮ ಬರವಣಿಗೆ ಓದಿಸುವವರಿಗೆ ಮಾತ್ರ ಸಿರಿತನ ಬಡತನ ಎಲ್ಲ ಓದೋ ಮನಗಳಿಗೆ ಯಾವುದು ಇಲ್ಲ ಪದವಿ ಅಂಕೆ ಇದ್ದರೆ ನೀ ಗೆದ್ದ ಹಾಗಲ್ಲ ವಿನಯ ಮೌಲ್ಯ ಎಂದಿಗೂ ಸೋಲುವುದಿಲ್ಲ ಪಾಠಶಾಲಾ ಪಾಠಶಾಲಾ ಪಾಠಶಾಲಾ ಪಾಠಶಾಲಾ
Audio Features
Song Details
- Duration
- 05:21
- Tempo
- 93 BPM