Sangathi Neenu
1
views
Lyrics
ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ನನ್ನಿಂದ ನೀನು ಬೇರಾದ ಮೇಲೆ ನೆನಪೊಂದೇ ಬದುಕಾಗಿದೆ ♪ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ನನ್ನಿಂದ ನೀನು ಬೇರಾದ ಮೇಲೆ ನೆನಪೊಂದೇ ಬದುಕಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ♪ ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನಿಗೂ ಮತ್ಸರವು ಬಂತು ನೋಡು ನಮ್ಮಿಬ್ಬರ ಅನುರಾಗದ ಅನುಬಂಧವ ಕಂಡಾಗಲೇ ಪರಶಿವನಿಗೂ ಮತ್ಸರವು ಬಂತು ನೋಡು ಹುಣ್ಣಿಮೆ ಮಗಳೋ, ತಂಪಿನ ತವರೋ ಚೆಲುವಿಗೆ ನಿಧಿಯೋ, ಒಲವಿನ ಸುಧೆಯೋ ನೀನಿಲ್ಲದೆ ಈ ಕಂಗಳು ಮಂಜಾದವು ಓ ನಲ್ಲೇ ನಿನ್ನ ಸಹಚಾರದಲ್ಲಿ ಎಂದೆಂದೂ ಸಿಗದ ಸವಿ ಜೇನ ಕಂಡೆ ಮರುಳಾಗಿ ಮಾಡಿ ಮರೆಯಾದೆ ಯಾಕೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ♪ ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು ಕೈ ಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ ಕಣ್ಣಿಟ್ಟರೆ ಕರಗಿದೆನು ಮುತ್ತಿಟ್ಟರೆ ಬೆರಗಿದೆನು ಕೈ ಬಿಟ್ಟರೆ ಬಾಳೆಲ್ಲಿದೆ ಹೇಳೆ ಹೂವೆ ದುಖ: ಅನ್ನೋ ದೋಣಿ ಮೇಲೆ ನಿನ್ನ ನಾನು ಸೇರೋದೆಲ್ಲೆ ನಕ್ಕಂತಿರೋ ನಕ್ಷತ್ರವು ನೀನಲ್ಲವೇ ಓ ಚೆನ್ನೆ ನಿನ್ನ ನೆನಪಲ್ಲಿ ನಾನು ಬಾಳೋದು ಬಲ್ಲೆ ಯುಗವಾದರೇನು ಪ್ರೀತಿಗೆ ಒಂದು ಕಥೆಯಾದೆ ನಾನು ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಪ್ರತಿ ರಾತ್ರಿ ನನ್ನ ಕನಸಲ್ಲಿ ಬರುವೆ ಆ ಪ್ರೀತಿಗಾಗೆ ಕಾಯುವೆ ಸಂಗಾತಿ ನೀನು ದೂರಾದ ಮೇಲೆ ಬದುಕೆಲ್ಲ ಬರಿದಾಗಿದೆ ಬದುಕೆಲ್ಲ ಬರಿದಾಗಿದೆ
Audio Features
Song Details
- Duration
- 05:01
- Key
- 2
- Tempo
- 88 BPM