Kambada Myalina (From "Nagamandala")
2
views
Lyrics
ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊಟ್ಟ ಹೇಳೇ ಉತ್ತಾರವ ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ ಭಿತ್ತಿಯಾ ಮ್ಯಾಲಿನ ಚಿತ್ತಾರವೇ ♪ ನೀರೊಲೆಯಾ ನಿಗಿ ಕೆಂಡ ಸತ್ಯವೇ ಈ ಅಭ್ಯಂಜನವಿನ್ನೂ ನಿತ್ಯವೇ ಒಳ್ಳೆ ಗಮಗುಡುತಿಯಲ್ಲೇ ಸೀಗೆಯೇ ನಿನ್ನ ವಾಸನೀ ಹರಡಿರಲಿ ಹೀಗೆಯೇ ♪ ನೀರೊಲೆಯಾ ನಿಗಿ ಕೆಂಡ ಸತ್ಯವೇ ಈ ಅಭ್ಯಂಜನವಿನ್ನೂ ನಿತ್ಯವೇ ಒಳ್ಳೆ ಘಮಗುಡುತಿಯಲ್ಲೇ ಸೀಗೆಯೇ ನಿನ್ನ ವಾಸನೀ ಹರಡಿರಲಿ ಹೀಗೆಯೇ ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೋಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ ♪ ಒಪ್ಪಿಸುವೆ ಹೂ-ಹಣ್ಣು ಭಗವಂತ ನೆಪ್ಪಿಲೆ ಹರಸುನಗಿ ಇರಲೆಂತ ಕಪ್ಪುರವ ಬೆಳಗುವೆ ದೇವನೇ ತಪ್ಪದೆ ಬರಲೆನ್ನ ಗುಣವಂತ ♪ ಒಪ್ಪಿಸುವೆ ಹೂ-ಹಣ್ಣು ಭಗವಂತ ನೆಪ್ಪಿಲೇ ಹರಸುನಾಗಿ ಇರಲೆಂತ ಕಪ್ಪುರವ ಬೆಳಗುವೆ ದೇವನೇ ತಪ್ಪದೆ ಬರಲೆನ್ನ ಗುಣವಂತ ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೋಂಡಿಹೆನ ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ ಕಂಬದಾ ಮ್ಯಾಲಿನ ಗೊಂಬೆಯೇ ನಂಬಲೇನ ನಿನ್ನ ನಗೆಯನ್ನಾ ಭಿತ್ತಿಯಾ ಮ್ಯಾಲಿನ ಚಿತ್ತಾರವೇ ಚಿತ್ತ ಗೊಟ್ಟ ಹೇಳೇ ಉತ್ತಾರವ
Audio Features
Song Details
- Duration
- 04:27
- Key
- 8
- Tempo
- 175 BPM