Nee Hinga Nodabyada
2
views
Lyrics
ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಾಂಗ ನೋಡಬ್ಯಾಡ ನನ್ನ (ನನ್ನ) ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ) ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಾಂಗ ನೋಡಬ್ಯಾಡ ನನ್ನ (ನನ್ನ) ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ) ♪ ಕದ್ದು ಕದ್ದು phone ಹಚ್ಚುತೀ ಮುದ್ದು ಮುತ್ತು ಅಂತ ಕಾಡುತೀ ಒಂದೊಂದಂತ ತಂಟೆ ಮಾಡುತೀ ತುಂಟಾಟ ದೊರೆ ಆಗುತೀ ಕನ್ಯೆ ಆಸೆ ಪೂರ ಮಾಡೋ ಹೈದ ನನ್ನವ ಸನ್ನೆಯಾಗೆ ಎಲ್ಲಾ ಹೇಳೋ ಶಾನ್ಯ ನನ್ನವ ಮಾತು ಮಾತಲ್ಲೇ ಕುಂತು ಕುಂತಲ್ಲೇ ಎಲ್ಲರ ಗೆಲ್ಲೋ ಕುವರ ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಂಗ ನೋಡಿದರ ನನ್ನ (ನನ್ನ) ಲಗೂನ ಆಗಬೇಕು ಲಗ್ನ (ಚಿನ್ನ, ಚಿನ್ನ, ಚಿನ್ನ, ಚಿನ್ನ) ♪ ಕೋಟಿ ಕೋಟೆಯಲ್ಲೇ, ಲೋಕಬಂಧಿ ಆಗಿಹೋಗೇತಿ ಪ್ರೀತಿ ಗೀತಿಗಿಲ್ಲಿ, ನಾಕಬಂಧಿ ಸಿದ್ದವಾಗೇತಿ ಚುಡಾಯಿಸೋರ ಕಿಚಾಯಿಸೋರ ಮುಂಡಾಸು ಮಣ್ಣು ಮಸಿ ಸಂಭಾಳಿಸೋರ ನಿಭಾಯಿಸೋರ ಕಂಡಾಗ ಭಾಳ ಖುಷಿ ಊರಿಗೂರೇ ಹೊಗಳೋ ಹಾಂಗ ಒಂದಾಗಿರಬೇಕಾ ಪೂರಿ ಭಾಜಿ ಜೋಡಿಯಂಗ ಮಸ್ತಾಗಿರಬೇಕಾ ತಾಳಿ ಕಟ್ಟೋ ತನಕ ತಾಳಬೇಕಾ, ಕಾಯೋದು ಭಾಳ ಸುಖ ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ನಾವ್ ಈಗ ದೂರ ಇದ್ರೆ ಚೆನ್ನ (ಚಿನ್ನ, ಚಿನ್ನ, ಚಿನ್ನ, ಚಿನ್ನ) ♪ ನೀ ನನ್ನ ಚೆನ್ನಯ್ಯ (ಚೆನ್ನಯ್ಯ) ನಾ ನಿನ್ನ ಚೆನ್ನರಸಿ (ಚೆನ್ನರಸಿ) ಆಸಿಯಾ ಮುಂದ್ಹಾಕಿ, ಸ್ವಲ್ಪ ತಡ್ಕರೀ ಆಷಾಡ ಜಾರಿ ಶ್ರಾವಣ ತೋರೋ ಮುಹೂರ್ತ ಭರೋಭರಿ ಢಂಗೂರ ಸಾರಿ ಊರೂರೇ ಸೇರಿ, ಸಿ-ಊಟ ಮಾಡೋ ಪರಿ ಜಟ್ಟಿ ಮೀಸೆ ಮಣ್ಣು ಮಾಡೋ ವೀರ ಹಮ್ಮೀರ ರೊಟ್ಟಿ ಮ್ಯಾಲ ಬೆಣ್ಣೆ ಹಂಗ ಕರ್ಗೋ ಸರಧಾರ ಮತ್ತೊಂದು ಸಾರಿ ತನ್ನಾಸೆ ಮೀರಿ ಮನಸ್ಸನ್ನು ಕದ್ಧಾ ಮದನ ನೀ ಹಿಂಗ ನೋಡಬ್ಯಾಡ ನನ್ನ ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ನಾವ್ ಈಗ ದೂರ ಇದ್ರೆ ಚೆನ್ನ (ಚೆನ್ನ) ನೀ ಹಿಂಗ ನೋಡಬ್ಯಾಡ ನನ್ನ (ನನ್ನ) ಕಣ್ಣಲ್ಲಿ ಕಾಡ್ತೀಯ ಚಿನ್ನ (ಚಿನ್ನ) ನೀ ಹಾಂಗ ನೋಡಬ್ಯಾಡ ನನ್ನ ನಾವ್ ಈಗ ದೂರ ಇದ್ರೆ ಚೆನ್ನ ಚಿನ್ನ, ಚಿನ್ನ, ಚಿನ್ನ, ಚಿನ್ನ ನೀ ಹಿಂಗ ನೋಡಬ್ಯಾಡ ನನ್ನ ಕಣ್ಣಲ್ಲಿ ಕಾಡ್ತೀಯ ಚಿನ್ನ ನೀ ಹಾಂಗ ನೋಡಿದರ ನನ್ನ ಲಗೂನ ಆಗಬೇಕು ಲಗ್ನ
Audio Features
Song Details
- Duration
- 04:00
- Key
- 1
- Tempo
- 174 BPM