Ahah Ee Bedurugombey
3
views
Lyrics
ಆಹಾ ಈ ಬೆದರು ಗೊಂಬೆಗೆ ಜೀವ ಬಂದಿರುವ ಹಾಗಿದೆ ಎಹೆ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ ನೆನಪಿನ ಜಾತ್ರೆಯಲಿ ಅಲೆದು ನಾ, ಕನಸಿನ ಕನ್ನಡಿಯ ಕೊಳ್ಳಲೇ ಹೇ, ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೇ ಆಹಾ ಈ ಬೆದರುಬೊಂಬೆಗೆ ಜೀವ ಬಂದಿರುವ ಹಾಗಿದೆ ಎಹೆ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ ♪ ಕೆನ್ನೆಯ ಗುಳಿಯೇ ನಿನ್ನ ಕೀರುತಿಯೇ ಮುಂಗೋಪವೇನು ನಿನ್ನ ಮೂಗುತಿಯೇ ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯಾ ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯಾ ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ ಕಳೆದು ಹೋಗಿರುವೆ ದಾರಿ ತಿಳಿಸುವೆಯಾ ಆಹಾ ಈ ಬೆದರುಬೊಂಬೆಗೆ ಜೀವ ಬಂದಿರುವ ಹಾಗಿದೆ ಎಹೆ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ ♪ ಪ್ರೀತಿಗೆ ಯಾಕೆ ಈ ಉಪವಾಸ ಯಾತಕ್ಕೂ ಇರಲಿ ನಿನ್ನ ಸಹವಾಸ ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ ನಂಬಿ ಕೆಟ್ಟಿರುವೆ ಏನು ಪರಿಹಾರ ನಿನಗೆ ಕಟ್ಟಿರುವೆ ಮನದ ಗಡಿಯಾರ ಆಹಾ ಈ ಬೆದರುಬೊಂಬೆಗೆ ಜೀವ ಬಂದಿರುವ ಹಾಗಿದೆ ಏಹ್ಹೆಹ್ಹೆ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ ನೆನಪಿನ ಜಾತ್ರೆಯಲಿ ಅಲೆದು ನಾ, ಕನಸಿನ ಕನ್ನಡಿಯ ಕೊಳ್ಳಲೇ ಹೇ, ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೇ, ಲೇ, ಲೇ, ಲೇ, ಲೇ, ಲೇ
Audio Features
Song Details
- Duration
- 04:02
- Key
- 6
- Tempo
- 90 BPM