Deepadinda Deepava
3
views
Lyrics
ದೀಪದಿಂದ ದೀಪವ, ದೀಪವ, ದೀಪವ ಹಚ್ಚಬೇಕು ಮಾನವ, ಮಾನವ, ಮಾನವ ಪ್ರೀತಿಯಿಂದ ಪ್ರೀತಿ ಹಂಚಿರೋ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಭೇದ ನಿಲ್ಲಲು ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ, ನೀ ತಿಳಿಯೋ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ♪ ಆಸೆ ಹಿಂದೆ ದುಃಖ ಎಂದರು ರಾತ್ರಿ ಹಿಂದೆ ಹಗಲು ಎಂದರು ದ್ವೇಷವೆಂದು ಹೊರೆ ಎಂದರು ಹಬ್ಬವದಕೆ ಹೆಗಲು ಎಂದರು ಎರಡು ಮುಖದ ನಮ್ಮ ಜನುಮದ ವೇಷಾವಳಿ ತೆಗೆದು ಹಾಲ್ಬೆಳಕ ಕುಡಿವುದೀ ದೀಪಾವಳಿ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ, ನೀ ತಿಳಿಯೋ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ♪ ಮಣ್ಣಿನಿಂದ ಹಣತೆಯಾದರೆ ಬೀಜದಿಂದ ಎಣ್ಣೆಯಾಯಿತು ಅರಳಿಯಿಂದ ಬತ್ತಿಯಾದರೆ ಸುಡುವ ಬೆಂಕಿ ಜ್ಯೋತಿಯಾಯಿತು ನಂದಿಸುವುದು ತುಂಬ ಸುಲಭವೋ ಹೇ ಮಾನವ ಆನಂದಿಸುವುದು ತುಂಬ ಕಠಿಣವೋ ಹೇ ದಾನವ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು
Audio Features
Song Details
- Duration
- 03:46
- Key
- 6
- Tempo
- 151 BPM