Dasanagu Visheshanagu
3
views
Lyrics
ಎಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ತಾನಲ್ಲ ತನ್ನದಲ್ಲ ಆಸೆ ತರವಲ್ಲ, ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು ♪ ಆಶ ಕ್ಲೇಶ ದೋಷವೆಂಬ ಅಬ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ ಎಸು ದೇಶ ತಿರುಗಿದರೆ ಬಾಹುದೇನೋ ಅಲ್ಲಿ ಹೋಗೇನೋ ದೋಷನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಎಸು ಬಾರಿ ಮಾಡಿದರೆ ಫಲವೇನು ಈ ಛಲವೇನು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ♪ ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಶನ್ನನ್ನು ಒಂದು ಬಾರಿ ಯಾರು ಹಿಂದ ನೆನಯಲಿಲ್ಲ ಮನ ದಣಿಯಲಿಲ್ಲ ಬಂದು ಬಂದು ಭ್ರಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ ಸಂದೇಹವ ಮಾಡಿದರು ಅರಿಯು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕ್ತಿಯನ್ನು ಬೇಡುಕಂಡ್ಯ ನೀ ನೋಡುಕಂಡ್ಯ ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ♪ ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ ಸೋರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ ಗಾರುಡಿಯ ಮತ ಬಿಟ್ಟು ನಾದ ಬ್ರಹ್ಮನ ಪಿಡಿದು ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸಮನದಿಂದ ನಾರಾಯಣ ಅಚ್ಯುತ ಅನಂತಾದಿ ಕೇಶವನ ನಾರಾಯಣ ಅಚ್ಯುತ ಅನಂತಾದಿ ಕೇಶವನ ಸಾರಾಮೃತವನುಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು ದಾಸನಾಗು ವಿಶೇಷನಾಗು ದಾಸನಾಗು ಭವ ಪಾಶನೀಗು
Audio Features
Song Details
- Duration
- 05:44
- Key
- 8
- Tempo
- 130 BPM